ಕೆನಡಾದ ದೂರದ ವಾಯುವ್ಯ ಪ್ರಾಂತ್ಯದ ಫೋರ್ಟ್ ಸ್ಮಿತ್ ಬಳಿ ಗಣಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಸಣ್ಣ ವಿಮಾನ ಅಪಘಾತಕ್ಕೀಡಾಗಿದ್ದು, ಆರು ಜನರು ಸಾವನ್ನಪ್ಪಿದ್ದಾರೆ.
ವಿಮಾನವು ರಿಯೊ ಟಿಂಟೊ ಎಂಬ ಗಣಿಗಾರಿಕೆ ಸಂಸ್ಥೆಗೆ ಸೇರಿದ ಡಯಾವಿಕ್ ವಜ್ರದ ಗಣಿಗೆ ಹೋಗುತ್ತಿತ್ತು. ಫೋರ್ಟ್ ಸ್ಮಿತ್ ಬಳಿ ಟೇಕ್ ಆಫ್ ಆದ ನಂತರ ಏರ್ ಟ್ರಾಫಿಕ್ ಕಂಟ್ರೋಲ್ನೊಂದಿಗೆ ಸಂಪರ್ಕವನ್ನು ಕಳೆದುಕೊಂಡಾಗ ಸ್ಲೇವ್ ನದಿಯ ಬಳಿ ಇದು ಪತ್ತೆಯಾಗಿದೆ.
ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗಾಗಿ ರಾಯಲ್ ಕೆನಡಿಯನ್ ವಾಯುಪಡೆಯ ಮೂರು ಸ್ಕ್ವಾಡ್ರನ್ಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಕೆನಡಾದ ಸಶಸ್ತ್ರ ಪಡೆಗಳ ಸಾರ್ವಜನಿಕ ವ್ಯವಹಾರಗಳ ಅಧಿಕಾರಿ ಮ್ಯಾಕ್ಸಿಮ್ ಕ್ಲೀಷೆ ಹೇಳಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನಾರ್ತ್ ವೆಸ್ಟ್ ಟೆರಿಟರೀಸ್ ಪ್ರೀಮಿಯರ್ ಆರ್ ಜೆ ಸಿಂಪ್ಸನ್ ಸಂತಾಪ ಸೂಚಿಸಿದ್ದಾರೆ.