ಬೆಂಗಳೂರು : 4 ವರ್ಷದ ಬಾಲಕನ ಮೇಲೆ ಸಾಕುನಾಯಿ ದಾಳಿ ನಡೆಸಿದ ಘಟನೆ ಇಂದಿರಾನಗರದ ಗಣೇಶ್ ಟೆಂಪಲ್ ಬಳಿ ನಡೆದಿದೆ.
ಮಗು ಚೀರಾಟ ಕೇಳಿ ಸ್ಥಳಕ್ಕೆ ಬಂದ ಮಗುವಿನ ತಂದೆ ಮೇಲೂ ರಾಟ್ ವೀಲರ್ ನಾಯಿ ದಾಳಿ ನಡೆಸಿದೆ. ಮಗುವಿನ ತಲೆ ಭಾಗಕ್ಕೆ ಕಚ್ಚಿದ ನಾಯಿ ಗಂಭೀರವಾಗಿ ಗಾಯಗೊಳಿಸಿದೆ . ಸಾಕು ನಾಯಿ ದಾಳಿಗೆ ರಿಷದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಇಂದಿರಾನಗರದ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.