ಬೆಂಗಳೂರು : ಬೆಂಗಳೂರು ಬೆನ್ನಲ್ಲೇ ಮೈಸೂರಿನ ನಂಜನಗೂಡಿನಲ್ಲೂ ಮೂಕ ಪ್ರಾಣಿಗಳ ಮೇಲೆ ದಾಳಿ ನಡೆಸಲಾಗಿದೆ.
ದೇವಸ್ಥಾನದಲ್ಲಿ ಹರಕೆಗೆ ಬಿಟ್ಟ ಕರುವಿನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಗಾಯಗೊಳಿಸಿ ವಿಕೃತಿ ಮೆರೆದಿದ್ದಾರೆ. ಕರುವಿನ ಹಿಂಬದಿಗೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದ್ದು, ಬಾಲ ಕಟ್ ಆಗುವ ಸ್ಥಿತಿಯಲ್ಲಿದೆ. ಸದ್ಯ ಕರುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.