ಬೆಂಗಳೂರು : ಮಕ್ಕಳು ಸೀರಿಯಲ್-ಸಿನಿಮಾದಲ್ಲಿ ನಟಿಸಲು ಇನ್ಮುಂದೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಕಾರ್ಮಿಕ ಇಲಾಖೆ ಖಡಕ್ ಆದೇಶ ಹೊರಡಿಸಿದೆ.
ಮಕ್ಕಳನ್ನು ದಿನದ 5 ಗಂಟೆಗೂ ಹೆಚ್ಚು ಕಾಲ ಶೂಟಿಂಗ್ ನಲ್ಲಿ ಬಳಸುವ ಹಾಗಿಲ್ಲ, ತಿಂಗಳಲ್ಲಿ 27 ಕ್ಕೂ ಹೆಚ್ಚು ದಿನ ಮಕ್ಕಳನ್ನು ಶೂಟಿಂಗ್ ಗೆ ಬಳಸದಂತೆ ಆದೇಶ ಹೊರಡಿಸಲಾಗಿದೆ. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು, ಬಾಲ ನಟ, ನಟಿಯಾಗಿ ಸೀರಿಯಲ್-ಸಿನಿಮಾದಲ್ಲಿ ನಟಿಸಲು ಆಯೋಜಕರು, ನಿರ್ಮಾಪಕರು ಆಯಾ ಜಿಲ್ಲಾಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಕಾರ್ಮಿಕ ಇಲಾಖೆ ಸುತ್ತೋಲೆ ಹೊರಡಿಸಿದೆ. ಆದೇಶ ಪಾಲಿಸದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಕಾರ್ಮಿಕ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.