ಜಮ್ಮು ಮತ್ತು ಕಾಶ್ಮೀರ : ಗಡಿಯಲ್ಲಿ ಪಾಕಿಸ್ತಾನ ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿದ್ದು, ಜಮ್ಮುವಿನ ಮಕ್ವಾಲ್ ಪ್ರದೇಶದ ಗಡಿ ಭದ್ರತಾ ಪಡೆ ಪೋಸ್ಟ್ಗಳ ಮೇಲೆ ಪಾಕಿಸ್ತಾನ ರೇಂಜರ್ಗಳು ಗುಂಡಿನ ದಾಳಿ ನಡೆಸಿದ್ದಾರೆ.
ಸದ್ಯ ಗಡಿಯಲ್ಲಿ ಗುಂಡಿನ ಚಕಮಕಿ ಮುಂದುವರೆದಿದ್ದು, ಬಿಎಸ್ಎಫ್ ಕೂಡ ಪರಿಣಾಮಕಾರಿ ಪ್ರತೀಕಾರದೊಂದಿಗೆ ಪ್ರತಿಕ್ರಿಯಿಸಿದೆ. ಬಿಎಸ್ಎಫ್ ಬಿಒಪಿ (ಬಾರ್ಡರ್ ಔಟ್ಪೋಸ್ಟ್) ಅನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಪಡೆಗಳು ತಮ್ಮ ಭೂಪ್ರದೇಶದಿಂದ ಗಡಿಯಾಚೆಗಿನ ಗುಂಡಿನ ದಾಳಿ ನಡೆಸಿದ್ದು, ಈ ಘಟನೆಯಲ್ಲಿ ಪಾಕಿಸ್ತಾನದ 13 ಚೆನಾಬ್ ರೇಂಜರ್ಗಳು ಭಾಗಿಯಾಗಿದ್ದಾರೆ.
ಪಾಕಿಸ್ತಾನದ ಕಡೆಯಿಂದ ಅಪ್ರಚೋದಿತ ಆಕ್ರಮಣವಾಗಿ ಇಂದು ಸಂಜೆ 5.45 ರ ಸುಮಾರಿಗೆ ಗುಂಡಿನ ದಾಳಿ ಪ್ರಾರಂಭವಾಯಿತು ಎಂದು ಗಡಿ ಭದ್ರತಾ ಪಡೆ ಮೂಲಗಳು ತಿಳಿಸಿವೆ. ಸುಮಾರು 25 ನಿಮಿಷಕ್ಕೂ ಹೆಚ್ಚು ಕಾಲ ಎರಡೂ ಕಡೆಗಳ ನಡುವೆ ಭಾರಿ ಗುಂಡಿನ ಚಕಮಕಿ ನಡೆಯಿತು.