ಬೆಂಗಳೂರು : ನಟ ದರ್ಶನ್ ವಿರುದ್ಧದ ಹಳೇ ಕೇಸ್ ಗೆ ಮರುಜೀವ ಬಂದಿದ್ದು, ಕೆಂಗೇರಿ ಠಾಣೆಯಲ್ಲಿ ಹೊಸ ಎನ್ ಸಿ ಆರ್ ದಾಖಲಾಗಿದೆ.
ನಿರ್ಮಾಪಕ ಭರತ್ ಗೆ ಬೆದರಿಕೆ ಹಾಕಿದ್ದ ಹಳೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ದೂರು ದಾಖಲಾಗಿದ್ದು, , ಕೆಂಗೇರಿ ಠಾಣೆಯಲ್ಲಿ ಎನ್ ಸಿ ಆರ್ ದಾಖಲಾಗಿದೆ.
ನಿರ್ಮಾಪಕ ಭರತ್ ಗೆ ಬೆದರಿಕೆ ಹಾಕಿದ ಸಂಬಂಧ ಎನ್ ಸಿಆರ್ ದಾಖಲಾಗಿದ್ದು ಭಗವಾನ್ ಶ್ರೀ ಕೃಷ್ಣ ಚಿತ್ರದ ನಿರ್ಮಾಪಕ ಭರತ್ ಅವರು ಈ ಹಿಂದೆಯೇ ದೂರು ನೀಡಿದ್ದರು. 2022 ರಲ್ಲಿ ಚಿತ್ರದ ನಾಯಕ ದೃವನ್ ವಿರುದ್ಧ ದೂರು ದಾಖಲಾಗಿದೆ. ನಟ ದರ್ಶನ್ ಕೈಯಲ್ಲಿ ಪೋನ್ ಮೂಲಕ ಬೆದರಿಕೆ ಹಾಕಿಸಿದ ಆರೋಪವೂ ಕೇಳಿ ಬಂದಿದೆ.ನಟ ದರ್ಶನ್ ಸದ್ಯ ಬಳ್ಳಾರಿ ಜೈಲಿನಲ್ಲಿದ್ದು, ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ಅ.22 ಕ್ಕೆ ವಿಚಾರಣೆ ನಿಗದಿಪಡಿಸಿದೆ.