ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಿಂದ ಕುಖ್ಯಾತ ರೌಡಿಶೀಟರ್ ಓರ್ವ ಎಸ್ಕೇಪ್ ಆದ ಘಟನೆ ಇಂದು ಮುಂಜಾನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮಾಗಲು ತಾಲೂಕಿನ ರೌಡಿಶೀಟರ್ ಪೂರ್ಣೇಶ್ ಎಂಬಾತ ಚಿಕ್ಕಮಗಳೂರಿನ ಮಲ್ಲೇಗೌಡ ಆಸ್ಪತ್ರೆಯಿಂದ ಇಂದು ಮುಂಜಾನೆ ಎಸ್ಕೇಪ್ ಆಗಿದ್ದಾನೆ.
ಕೊಲೆ ಯತ್ನ ಪ್ರಕರಣದಲ್ಲಿ ಈ ಹಿಂದೆ ಪೂರ್ಣೇಶ್ ನನ್ನು ಬಂಧಿಸಲಾಗಿತ್ತು, ಬಂಧಿಸಲು ಹೋದಾಗ ಈತ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದನು, ನಂತರ ಪೊಲೀಸರು ಈತನ ಕಾಲಿಗೆ ಗುಂಡು ಹಾರಿಸಿ ಬಂದಿಸಿದ್ದರು.1 ತಿಂಗಳಿನಿಂದ ಜಿಲ್ಲಾಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ರೌಡಿಶೀಟರ್ ಪೂರ್ಣೇಶ್ ಇಂದು ಮುಂಜಾನೆ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.