ಮಾಸ್ಕೋ ಬಳಿ ಕನ್ಸರ್ಟ್ ಶೂಟಿಂಗ್ ನಂತರ ಅಧ್ಯಕ್ಷ ಪುಟಿನ್ ಭಾನುವಾರ ರಾಷ್ಟ್ರೀಯ ಶೋಕಾಚರಣೆಯ ದಿನ ಎಂದು ಘೋಷಿಸಿದ್ದಾರೆ.
ಮಾಸ್ಕೋ ಬಳಿಯ ಕ್ರೋಕಸ್ ಸಿಟಿ ಹಾಲ್‌ನಲ್ಲಿ ನಡೆದ ಸಂಗೀತ ಕಚೇರಿಯಲ್ಲಿ ಸಂಭವಿಸಿದ ದುರಂತ ಗುಂಡಿನ ಘಟನೆಯ ಕುರಿತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ನಾನು ಇಂದು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ರಕ್ತಸಿಕ್ತ, ಬರ್ಬರ ಭಯೋತ್ಪಾದಕ ಕೃತ್ಯಕ್ಕೆ ಸಂಬಂಧಿಸಿದಂತೆ, ಅದರಲ್ಲಿ ಬಲಿಯಾದ ಹತ್ತಾರು ಅಮಾಯಕರು, ಶಾಂತಿಯುತ ಜನರಿಗಾಗಿ ಸಂತಾಪ ಸೂಚಿಸುತ್ತೇನೆ. ಮಾರ್ಚ್ 24 ಅನ್ನು ರಾಷ್ಟ್ರೀಯ ಶೋಕಾಚರಣೆಯ ದಿನವೆಂದು ಘೋಷಿಸುತ್ತೇನೆ ಎಂದು ಹೇಳಿದ್ದಾರೆ.
ಮಾಸ್ಕೋ ಬಳಿಯ ಕ್ರೋಕಸ್ ಸಿಟಿ ಹಾಲ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ 150 ಮಂದಿ ಸಾವನ್ನಪ್ಪಿದ್ದಾರೆ.