ನವದೆಹಲಿ: ಭಾರತೀಯ ವಾಯುಪಡೆಯ (ಐಎಎಫ್) ಪಿಲಾಟಸ್ ಪಿಸಿ 7 ಎಂಕೆ -2 ತರಬೇತಿ ವಿಮಾನವು ತೆಲಂಗಾಣದ ಮೇಡಕ್ ಜಿಲ್ಲೆಯ ತೂಪ್ರಾನ್ ನ ರಾವೆಲ್ಲಿ ಗ್ರಾಮದಲ್ಲಿ ಅಪಘಾತಕ್ಕೀಡಾಗಿದ್ದು, ಇಬ್ಬರು ಪೈಲಟ್ ಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವಿಮಾನವು ದುಂಡಿಗಲ್ ವಾಯುಪಡೆ ಅಕಾಡೆಮಿಯಿಂದ ಹೊರಟಿತ್ತು. ಐಎಎಫ್ ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್ ನಲ್ಲಿ ಈ ಘಟನೆಯ ಬಗ್ಗೆ ಪೋಸ್ಟ್ ಮಾಡಿದೆ:
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪೈಲಟ್ಗಳ ಸಾವಿಗೆ ಸಂತಾಪ ಸೂಚಿಸಿದ್ದು, “ಹೈದರಾಬಾದ್ ಬಳಿ ನಡೆದ ಈ ಅಪಘಾತದಿಂದ ದುಃಖಿತನಾಗಿದ್ದೇನೆ. ಇಬ್ಬರು ಪೈಲಟ್ಗಳು ಪ್ರಾಣ ಕಳೆದುಕೊಂಡಿರುವುದು ತೀವ್ರ ದುಃಖ ತಂದಿದೆ. ಈ ದುರಂತದ ಸಮಯದಲ್ಲಿ, ನನ್ನ ಆಲೋಚನೆಗಳು ದುಃಖಿತ ಕುಟುಂಬಗಳೊಂದಿಗೆ ಇವೆ” ಎಂದು ಟ್ವೀಟ್ ಮಾಡಿದ್ದಾರೆ.
ತೆಲಂಗಾಣ ಟುಡೇ ಪ್ರಕಾರ, ಕೆಲವೇ ನಿಮಿಷಗಳಲ್ಲಿ ವಿಮಾನವು ಸುಟ್ಟು ಬೂದಿಯಾಯಿತು. ಏತನ್ಮಧ್ಯೆ, ಐಎಎಫ್ ವಿಮಾನದಲ್ಲಿ ಎಷ್ಟು ಜನರು ಇದ್ದರು ಎಂದು ಸ್ಥಳೀಯರಿಗೆ ಖಚಿತವಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.