ನವದೆಹಲಿ: ವಿಧಾನಸಭೆ ಚುನಾವಣೆಗೆ ಮುನ್ನ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ಚಟುವಟಿಕೆ ತೀವ್ರಗೊಂಡಿದೆ.
ಕಾಂಗ್ರೆಸ್ ಸೇರುವ ವರದಿಯನ್ನು ಗುಲಾಂ ನಬಿ ಆಜಾದ್ ಪಕ್ಷ ನಿರಾಕರಿಸಿದೆ. ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಪಕ್ಷಕ್ಕೆ ಮರಳಿ ಸೇರ್ಪಡೆಗೊಳ್ಳುವ ಬಗ್ಗೆ ಊಹಾಪೋಹಗಳಿವೆ.
ಆದರೆ, ಈ ವದಂತಿಗಳನ್ನು ಆಜಾದ್ ದೃಢವಾಗಿ ನಿರಾಕರಿಸಿದ್ದಾರೆ. ಕಾಂಗ್ರೆಸ್ ತೊರೆದ ನಂತರ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ(ಡಿಪಿಎಪಿ) ಸ್ಥಾಪಿಸಿದ ಆಜಾದ್ ಕಾಂಗ್ರೆಸ್‌ಗೆ ಮರಳುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದ್ದಾರೆ.
ಡಿಪಿಎಪಿಯ ಮುಖ್ಯ ವಕ್ತಾರ ಸಲ್ಮಾನ್ ನಿಜಾಮಿ ಪ್ರಕಾರ, ಆಜಾದ್ ನಿರ್ಗಮಿಸಿದ ನಂತರ ಯಾವುದೇ ಕಾಂಗ್ರೆಸ್ ನಾಯಕರು ಅವರನ್ನು ಭೇಟಿಯಾಗಿಲ್ಲ. ಆಜಾದ್ ಕೂಡ ಯಾವುದೇ ಕಾಂಗ್ರೆಸ್ ಪದಾಧಿಕಾರಿಗಳನ್ನು ಸಂಪರ್ಕಿಸಿಲ್ಲ. ಸಂಭಾವ್ಯ ಮರು ಸೇರ್ಪಡೆಯ ಕುರಿತು ಇತ್ತೀಚಿನ ವದಂತಿಗಳು ಆಧಾರ ರಹಿತವಾಗಿವೆ ಎಂದು ನಿಜಾಮಿ ಸ್ಪಷ್ಟಪಡಿಸಿದ್ದಾರೆ,