ಭಾರತದಲ್ಲಿ ಬ್ಯಾಂಕುಗಳಿಗೆ ವಂಚನೆ ಮಾಡಿ ಪರಾರಿಯಾಗಿದ್ದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಆಂಟುಗುವಾದಲ್ಲಿ ನಾಪತ್ತೆಯಾಗಿದ್ದು, ಅವರ ಕುಟುಂಬದವರು ಹುಡುಕಾಟ ನಡೆಸಿದ್ದಾರೆ.
ಆಂಟಿಗುವಾದಲ್ಲಿ ಮೆಹುಲ್ ಚೋಕ್ಸಿ ನಾಪತ್ತೆಯಾಗಿದ್ದು ಸ್ಥಳೀಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂಬ ಮಾಹಿತಿ ಗೊತ್ತಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚಿಸಿದ್ದ ವಜ್ರದ ವ್ಯಾಪಾರಿ ನೀರವ್ ಮೋದಿ ಲಂಡನ್ ನಲ್ಲಿದ್ದು, ಆತನ ಮಾವ ಮೆಹುಲ್ ಚೋಕ್ಸಿ ಆಂಟಿಗುವಾದಲ್ಲಿದ್ದು, ಇದ್ದಕ್ಕಿದ್ದಂತೆ ಮೆಹಲ್ ಚೋಕ್ಸಿ ನಾಪತ್ತೆಯಾಗಿದ್ದಾನೆನ್ನಲಾಗಿದೆ.
ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ಪೊಲೀಸ್ ಆಯುಕ್ತ ಆಟ್ಲಿ ರೋಡ್ನೀ ಮಾಹಿತಿ ನೀಡಿರುವುದಾಗಿ ಆಂಟಿಗುವಾ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಕೆರೆಬಿಯನ್ ದ್ವೀಪ ರಾಷ್ಟ್ರವಾಗಿರುವ ಆಂಟಿಗುವಾದಲ್ಲಿ ಮೆಹುಲ್ ಚೋಕ್ಸಿ ಭಾನುವಾರ ವಾಹನ ಚಾಲನೆ ಮಾಡಿರುವುದು ಕಂಡುಬಂದಿದೆ. ಬಳಿಕ ಆತನ ಸುಳಿವು ಪತ್ತೆಯಾಗಿಲ್ಲ. ಆದರೆ ವಾಹನ ಕಂಡುಬಂದಿದೆ. ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.
ವಂಚಕ ನೀರವ್ ಮೋದಿ ಮತ್ತು ಅವರ ಮಾವ ಮೆಹುಲ್ ಚೋಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸುಮಾರು 10 ಸಾವಿರ ಕೋಟಿ ರೂ,.ಗೂ ಅಧಿಕ ವಂಚನೆ ಮಾಡಿ ವಿದೇಶಕ್ಕೆ ಪರರಿಯಾಗಿದ್ದಾರೆ. ಚೋಕ್ಸಿ 2017 ರಲ್ಲಿ ಆಂಟಿಗುವಾದ ಪೌರತ್ವ ಪಡೆದುಕೊಂಡಿದ್ದಾರೆ.