
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಾದ್ಯಂತ ಭೂಕಂಪನದ ಅನುಭವವಾಗಿದೆ. ಇಂದು ರಾತ್ರಿಗೆ 8 ಗಂಟೆ ಸುಮಾರಿಗೆ ದೆಹಲಿ, NCR ಪ್ರದೇಶದಲ್ಲಿ ಭೂಮಿ ಕಂಪಿಸಿದ್ದು, ನಿವಾಸಿಗಳಿಗೆ ಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 5.4 ರಷ್ಟು ತೀವ್ರತೆ ದಾಖಲಾಗಿದೆ.
ಆತಂಕಗೊಂಡ ಅನೇಕರು ಮನೆ, ಕಟ್ಟಡಗಳಿಂದ ಹೊರಬಂದು ತಮಗಾದ ಅನುಭವ ಹಂಚಿಕೊಂಡಿದ್ದಾರೆ. ಕೆಲ ಸೆಕೆಂಡ್ ಭೂಮಿ ನಡುಗಿದ ಅನುಭವವಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲೂ ಭೂಮಿ ಕಂಪಿಸಿದೆ. ಒಂದೇ ವಾರದಲ್ಲಿ ಎರಡು ಬಾರಿ ಉತ್ತರ ಭಾರತದ ಹಲವು ಕಡೆ ಭೂಕಂಪವಾಗಿರುವುದು ಆತಂಕ ಹೆಚ್ಚಿಸಿದೆ.
ದೆಹಲಿ-ಎನ್‌ಸಿಆರ್, ನೋಯ್ಡಾ, ಗಾಜಿಯಾಬಾದ್ ಮತ್ತು ಉತ್ತರ ಭಾರತದಾದ್ಯಂತ ಪ್ರಬಲ ಕಂಪನಗಳು ಸಂಭವಿಸಿವೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.