ಹಾಸನ: ರಾಜ್ಯದ ಹಲವು ಭಾಗಗಳಲ್ಲಿ ವರುಣನ ಆರ್ಭಟ ಜೋರಾಗಿದ್ದು, ಈ ನಡುವೆ ಭೂಕಂಪ ಕೂಡ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ಹಾಸನ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಇಂದು ಮುಂಜಾನೆ ಭೂಕಂಪನವಾಗಿದ್ದು, ಇದರ ಬೆನ್ನಲ್ಲೇ ಇದೀಗ ಕೊಡಗು ಜಿಲ್ಲೆY ಹಲವೆಡೆಗಳಲ್ಲಿ ಕೂಡ ಭೂಮಿ ಕಂಪಿಸಿದೆ. ಒಂದೆಡೆ ಭಾರಿ ಮಳೆ, ಮತ್ತೊಂದೆಡೆ ಭೂಕುಸಿತದ ಆತಂಕದ ನಡುವೆ ಭೂಕಂಪ ಕೂಡ ಸಂಭವಿಸುತ್ತಿರುವುದು ಜಿಲ್ಲೆಯ ಜನರನ್ನು ತಲ್ಲಣಗೊಳಿಸಿದೆ.
ಕೊಡಗಿನ ಸೋಮವಾರಪೇಟೆಯ ರೇಂಜರ್ ಬ್ಲಾಕ್, ನೇಗಳ್ಳೆ ಗ್ರಾಮ, ಮಡಿಕೇರಿ ನಗರ ಸೇರಿದಂತೆ ಹಲವೆಡೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.4ರಷ್ಟು ತೀವ್ರತೆ ದಾಖಲಾಗಿದೆ.