ಕೊಡಗು: ಕಂಠಪೂರ್ತಿ ಕುಡಿದು ಬಂದ ವ್ಯಕ್ತಿಯೊಬ್ಬ ಹೊರಗೆ ಬಾಗಿಲು ಹಾಕಿ ಮನೆಗೆ ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದಿದ್ದಾನೆ. ಪರಿಣಾಮ ಮನೆಯಲ್ಲಿದ್ದ 6 ಜನರು ಸಜೀವದಹನಗೊಂಡಿದ್ದಾರೆ. ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಕನೂರು ಗ್ರಾಮದಲ್ಲಿ ಇಂತದ್ದೊಂದು ಹೃದಯವಿದ್ರಾವಕ ಘಟನೆನಡೆದಿದೆ.
ಪಾನಮತ್ತನಾಗಿ ಬಂದಿದ್ದ ಎರವರ ಭೋಜ ಎಂಬಾತ ಎರವರ ಮಂಜು ಎಂಬುವವರ ಮನೆಗೆ ಬೆಂಕಿ ಹಚ್ಚಿದ್ದಾನೆ. ಮನೆ ಬಾಗಿಲು ಹೊರಗಿನಿಂದ ಲಾಕ್ ಮಾಡಿದ್ದರಿಂದ ಕುಟುಂಬ ಸದಸ್ಯರು ಹೊರಬರಲಾಗದೇ ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿದ್ದಾರೆ.
ಉತ್ತರ ಪ್ರದೇಶದಲ್ಲಿ ಮತ್ತೊಂದು ಆಘಾತಕಾರಿ ಘಟನೆ
ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.