
ಕೋವಿಡ್ ಲಸಿಕೆಯ ಎರಡು ಡೋಸ್ ಪಡೆದು 9 ತಿಂಗಳು ಪೂರ್ಣಗೊಳಿಸಿದ ಎಲ್ಲಾ ವಯಸ್ಕರರು ಏಪ್ರಿಲ್ 10 ರ ನಾಳೆಯಿಂದ ಬೂಸ್ಟರ್ ಡೋಸ್ ಪಡೆಯಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ವಯಸ್ಕರರು ಬೂಸ್ಟರ್ ಡೋಸ್ ಪಡೆಯಲು ಭಾನುವಾರದಿಂದ ಖಾಸಗಿ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಬಹುದಾಗಿದೆ.
ಇದರ ಮಧ್ಯೆ ಸೇವಾ ಶುಲ್ಕ ಕುರಿತಂತೆ ಈಗ ಆದೇಶ ಹೊರಡಿಸಲಾಗಿದ್ದು, ಖಾಸಗಿ ಆಸ್ಪತ್ರೆಗಳು ಲಸಿಕೆ ಬೆಲೆಯನ್ನು ಹೊರತುಪಡಿಸಿ 150 ರೂಪಾಯಿಗಳವರೆಗೆ ಸೇವಾ ಶುಲ್ಕ ಪಡೆಯಬಹುದಾಗಿದೆ ಎಂದು ತಿಳಿಸಲಾಗಿದೆ.