
ನವದೆಹಲಿ: ಪಿಕಲ್ ಬಾಲ್ ಆಟದ ವೇಳೆ ಖ್ಯಾತ ನಟಿ ಭಾಗ್ಯಶ್ರೀ ಅವರ ಹಣೆಗೆ ಗಾಯವಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ಗಾಯವು ಎಷ್ಟು ಆಳವಾಗಿತ್ತೆಂದರೆ ಅವರಿಗೆ 13 ಹೊಲಿಗೆ ಹಾಕಲಾಗಿದೆ.
ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ಭಾಗ್ಯಶ್ರೀ ಅವರ ಚಿತ್ರಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಒಂದು ಫ್ರೇಮ್‌ನಲ್ಲಿ, ಭಾಗ್ಯಶ್ರೀ ಅವರ ಹಣೆಯ ಮೇಲಿನ ಆಳವಾದ ಗಾಯದತ್ತ ಬೆರಳು ತೋರಿಸುತ್ತಿದ್ದಾರೆ.
ಸಲ್ಮಾನ್ ಖಾನ್ ಅವರ ‘ಮೈನೆ ಪ್ಯಾರ್ ಕಿಯಾ’ ಚಿತ್ರದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾದ ಭಾಗ್ಯಶ್ರೀ ಗುರುವಾರ ಗಾಯಗೊಂಡಿದ್ದಾರೆಎ. ಪಿಕಲ್ ಬಾಲ್ ಆಡುವಾಗ ಹಣೆಯ ಮೇಲೆ ಆಳವಾದ ಗಾಯವಾಗಿದ್ದು, ಗಾಯವು ತುಂಬಾ ತೀವ್ರವಾಗಿದ್ದರಿಂದ ಶಸ್ತ್ರಚಿಕಿತ್ಸೆ ಅಗತ್ಯವಾಗಿತ್ತು. ಅವರ ಹಣೆಯ ಮೇಲೆ 13 ಹೊಲಿಗೆಗಳನ್ನು ಹಾಕಲಾಗಿದೆ.
ಭಾಗ್ಯಶ್ರೀ ಅವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ, ಅವರ ಹಣೆಯ ಮೇಲೆ ಬ್ಯಾಂಡೇಜ್ ಇದ್ದು, ಗಾಯದ ಹೊರತಾಗಿಯೂ ಅವರು ನಗುತ್ತಿರುವ ಫೋಟೋ ವೈರಲ್ ಆಗಿವೆ.

View this post on Instagram