ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತಷ್ಟು ಕುಸಿತ ಕಂಡಿದ್ದು, ಒಂದು ಪೈಸೆ ಕುಸಿತದೊಂದಿಗೆ ಈಗ ಒಂದು ಡಾಲರ್ ಗೆ 80.06 ರೂಪಾಯಿ ತಲುಪಿದೆ. ಈ ಮೂಲಕ ಮತ್ತೊಮ್ಮೆ ದಾಖಲೆಯ ಕನಿಷ್ಠ ಮೌಲ್ಯವನ್ನು ರೂಪಾಯಿ ದಾಖಲಿಸಿದೆ.
ಜುಲೈ 19ರಂದು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದು ಡಾಲರ್ 80 ರೂಪಾಯಿ ಆಗಿದ್ದು, ಇದೀಗ ಮತ್ತಷ್ಟು ಕುಸಿತ ಕಾಣುವುದರೊಂದಿಗೆ 80 ರೂಪಾಯಿ ದಾಟಿದಂತಾಗಿದೆ.
ಯುರೋಪಿಯನ್ ಮಾರುಕಟ್ಟೆಯಲ್ಲಿ ಪ್ರಮುಖ ಜಾಗತಿಕ ಕರೆನ್ಸಿಗಳ ವಿರುದ್ಧ ಯುಎಸ್ ಡಾಲರ್ ಲಾಭವನ್ನು ಮುಂದುವರಿಸಿದ ಕಾರಣಕ್ಕೆ ಭಾರತೀಯ ರೂಪಾಯಿ ಮೌಲ್ಯ ಕುಸಿತ ಕಾಣುವಂತಾಗಿದೆ.