ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಕಳೆದ ರಾತ್ರಿ ಬಂಧನಕ್ಕೊಳಗಾಗಿ ಚಿತ್ರದುರ್ಗ ಕಾರಾಗೃಹದಲ್ಲಿದ್ದ ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಎದೆನೋವು ಕಾಣಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಕಾರಾಗೃಹ ಸಿಬ್ಬಂದಿ ತಪಾಸಣೆಗಾಗಿ ಶಿವಮೂರ್ತಿ ಶರಣರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದು, ತಜ್ಞ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ.
ತಪಾಸಣೆ ಬಳಿಕ ಹೆಚ್ಚಿನ ಚಿಕಿತ್ಸೆ ಅಗತ್ಯ ಬಂದರೆ ಆಸ್ಪತ್ರೆಯಲ್ಲೇ ಶ್ರೀಗಳನ್ನು ಇರಿಸಿಕೊಳ್ಳುವ ಸಾಧ್ಯತೆ ಇದೆ. ಯಾವುದೇ ತೊಂದರೆ ಇರದಿದ್ದರೆ ಅವರು ಮತ್ತೊಮ್ಮೆ ಕಾರಾಗೃಹಕ್ಕೆ ಹೋಗಬೇಕಾಗುತ್ತದೆ.