ನ್ಯೂಜಿಲೆಂಡ್ ಪ್ರಧಾನಮಂತ್ರಿ ಸ್ಥಾನಕ್ಕೆ ಜಸಿಂಡಾ ಅರ್ಡೆನ್ ದಿಢೀರ್ ರಾಜೀನಾಮೆ ನೀಡಿದ್ದು ವಿಶ್ವ ನಾಯಕರಿಗೆ ಅಚ್ಚರಿ ಮೂಡಿಸಿತ್ತು. ಇದೀಗ ದಿಢೀರ್ ಬೆಳವಣಿಗೆಯಲ್ಲಿ ಪ್ರಧಾನಮಂತ್ರಿ ಸ್ಥಾನಕ್ಕೆ ಆಡಳಿತಾರೂಢ ಲೇಬರ್ ಪಕ್ಷದ ಕ್ರಿಸ್ ಹಿಪ್ಕಿನ್ಸ್ ಅವರನ್ನ ಪ್ರಧಾನಮಂತ್ರಿ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
COVID-19 ಸಾಂಕ್ರಾಮಿಕ ರೋಗದ ವೇಳೆ ಮಹತ್ವದ ಪಾತ್ರ ವಹಿಸಿದ ಕ್ರಿಸ್ ಹಿಪ್ಕಿನ್ಸ್ ಲೇಬರ್ ಪಕ್ಷವನ್ನು ಮುನ್ನಡೆಸುವ ಏಕೈಕ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.
ಭಾನುವಾರ ನಡೆಯಲಿರುವ ಲೇಬರ್‌ನ 64 ಶಾಸಕರು ಅಥವಾ ಕಾಕಸ್‌ನ ಸಭೆಯಲ್ಲಿ 44 ವರ್ಷದ ಹಿಪ್ಕಿನ್ಸ್ ಹೊಸ ನಾಯಕನಾಗಿ ದೃಢೀಕರಿಸಲ್ಪಡುವ ನಿರೀಕ್ಷೆಯಿದೆ.
ಪಕ್ಷವು ಅವರನ್ನು ಏಕೈಕ ಅಭ್ಯರ್ಥಿ ಎಂದು ಘೋಷಿಸಿದ ನಂತರ ಹಿಪ್ಕಿನ್ಸ್ ಸುದ್ದಿಗೋಷ್ಠಿಯಲ್ಲಿ “ನಾವು ನಂಬಲಾಗದಷ್ಟು ಬಲವಾದ ತಂಡ ಹೊಂದಲಿದ್ದೇವೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.