ದಾವಣಗೆರೆ: ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರಶೇಖರ್ ಸಾವು ಪ್ರಕರಣ ಬಗೆದಷ್ಟು ಬಯಲಾಗುತ್ತಿದ್ದು, ಇದೀಗ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಚಂದ್ರಶೇಖರ್ ನದ್ದು ಅಪಘಾತದ ಸಾವಲ್ಲ, ಅದೊಂದು ಯೋಜಿತ ಕೊಲೆ ಎಂದು ಕುಟುಂಬಸ್ಥರು ಆರೊಪಿಸಿರುವ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡಿರುವ ಹೊನ್ನಾಳಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದೀಗ ಚಂದ್ರಶೇಖರ್ ನಾಪತ್ತೆಯಾದ ದಿನ. ಅ.30ರಂದು ಆತನ ಮೊಬೈಲ್ ಗೆ ಒಂದೇ ನಂಬರ್ ನಿಂದ 10ಕ್ಕೂ ಹೆಚ್ಚು ಬಾರಿ ಕರೆ ಬಂದಿದೆ ಎಂದು ತಿಳಿದುಬಂದಿದೆ.
ಚಂದ್ರಶೇಖರ್ ಮೊಬೈಲ್ ಪರಿಶೀಲನೆ ನಡೆಸಿದಾಗ ಕಾಲ್ ಹಿಸ್ಟ್ರಿಯಲ್ಲಿ ಅ.30ರಂದು ಚಂದ್ರಶೇಖರ್ ಮೊಬೈಲ್ ಗೆ ಒಂದೇ ಸಂಖ್ಯೆಯಿಂದ ನಿರಂತರವಾಗಿ ಕರೆ ಬಂದಿದ್ದು, ಅದು ಕೂಡ ರಾತ್ರಿ 10 ಗಂಟೆ ವೇಳೆ. ಅಂದು ರಾತ್ರಿ 10 ಗಂಟೆ ವೇಳೆ ಚಂದ್ರಶೇಖರ್ ಗೌರಿಗದ್ದೆಯಲ್ಲಿದ್ದ. ಈ ವೇಳೆ ಕೊಪ್ಪದಿಂದ ಆತನಿಗೆ ಫೋನ್ ಕಾಲ್ ಸತತವಾಗಿ ಬಂದಿದ್ದಾಗಿ ತನಿಖೆ ವೇಳೆ ತಿಳಿದುಬಂದಿದೆ.
ಈ ಫೋನ್ ಕಾಲ್ ಗೂ ಚಂದ್ರಶೇಖರ್ ಸಾವಿಗೂ ಲಿಂಕ್ ಇದೆಯೇ? ಎಂಬ ಅನುಮಾನ ವ್ಯಕ್ತವಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.