
ಪೇಮೆಂಟ್ ಫ್ಲಾಟ್ ಫಾರಂ ಪೇಟಿಎಂ ಇಂದು ಕೆಲ ಸಮಯದವರೆಗೆ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಭಾರತದ ಲಕ್ಷಾಂತರ ಬಳಕೆದಾರರು ಪರದಾಡಿದ್ದಾರೆ.
ಆಪ್ ಮಾತ್ರವಲ್ಲದೆ ಪೇಟಿಎಂ ವೆಬ್ಸೈಟ್ ಕೂಡ ಸ್ಥಗಿತಗೊಂಡ ಕಾರಣ ಬಳಕೆದಾರರು ಕೆಲಕಾಲ ಗೊಂದಲಕ್ಕೊಳಗಾದರು. ಲಾಗಿನ್ ಆದ ಬಳಕೆದಾರರಿಗೆ ತಕ್ಷಣವೇ ಡಿಸ್ ಕನೆಕ್ಟ್ ಆಗಿದ್ದು, ಮತ್ತೊಮ್ಮೆ ಲಾಗಿನ್ ಆಗಲು ಸಾಧ್ಯವಾಗಿಲ್ಲ.
ಇದರಿಂದ ಹಣ ಕಳುಹಿಸಲು, ಪಡೆಯಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ಪೇಟಿಎಂ ಅಧಿಕೃತ ಹೇಳಿಕೆ ನೀಡಿದ್ದು, ತಾಂತ್ರಿಕ ದೋಷದ ಕಾರಣಕ್ಕೆ ಈ ರೀತಿ ಆಗಿದೆ ಎಂದು ಹೇಳಿದೆ. ಅಲ್ಲದೆ ತಂತ್ರಜ್ಞರು ಆದಷ್ಟು ಬೇಗ ಇದನ್ನು ಪರಿಹರಿಸಲಿದ್ದಾರೆ ಎಂದು ಭರವಸೆ ನೀಡಿದೆ.
ಪೇಟಿಎಂ ಫಾಸ್ಟ್ ಟ್ಯಾಗ್ ಹೊಂದಿರುವವರಿಗೆ ಟೋಲ್ ಪ್ಲಾಜಾಗಳಲ್ಲಿ ಇದು ಯಾವ ರೀತಿ ತೊಂದರೆ ಆಗಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
