ಸಾಮಾಜಿಕ ಜಾಲತಾಣ ಟ್ವಿಟರ್ ಭಾರತೀಯ ಕಾಲಮಾನ ಸಂಜೆ ಏಳು ಗಂಟೆಯಿಂದ ಬಹಳಷ್ಟು ಬಳಕೆದಾರರಿಗೆ ಲಭ್ಯವಾಗುತ್ತಿಲ್ಲ.
ವಿಶ್ವದ ಹಲವೆಡೆ ಈ ಸಮಸ್ಯೆ ಕಂಡು ಬಂದಿದೆ ಎನ್ನಲಾಗಿದ್ದು, ಮೊಬೈಲ್ ಹಾಗೂ ಡೆಸ್ಕ್ ಟಾಪ್ ನಲ್ಲಿ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ.
ತಾಂತ್ರಿಕ ದೋಷವೇ ಇದಕ್ಕೆ ಕಾರಣ ಎನ್ನಲಾಗುತ್ತಿದ್ದು, ಈವರೆಗೆ ಟ್ವಿಟ್ಟರ್ ಈ ಕುರಿತು ಯಾವುದೇ ಮಾಹಿತಿ ನೀಡಿಲ್ಲ.
ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಟ್ವಿಟರ್ ಬಳಕೆದಾರರು ತಮಗೆ ಎದುರಾಗಿರುವ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.