ಕಾಮನ್ವೆಲ್ತ್ ಕ್ರೀಡಾಕೂಟದ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತದ 21 ವರ್ಷದ ಸಂಕೇತ ಸರ್ಗರ್ ಬೆಳ್ಳಿ ಪದಕ ಗೆದ್ದಿದ್ದಾರೆ. 55 ಕೆಜಿ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.
ಈ ಮೂಲಕ ಶನಿವಾರದಂದು ಭಾರತಕ್ಕೆ ಮೊದಲ ಪದಕ ಬಂದಿದ್ದು, ಪದಕದ ಬೇಟೆ ಇನ್ನು ಮುಂದೆ ಆರಂಭವಾಗಲಿದೆ.
ಸಂಕೇತ್ ಸರ್ಗರ್ ಒಟ್ಟು 248 ಕೆಜಿ ಭಾರ ಎತ್ತಿದ್ದು ಈ ಮೂಲಕ ಸ್ಪರ್ಧೆಯಲ್ಲಿ ಎರಡನೆಯವರಾಗಿ ಬೆಳ್ಳಿ ಪದಕಕ್ಕೆ ಭಾಜನರಾದರು.
ಮಲೇಶಿಯದ ಮಹಮ್ಮದ್ ಅನೀಖ್ ಚಿನ್ನ ಗೆದ್ದರೆ, ಶ್ರೀಲಂಕಾದ ದಿಲಂಕ ಇಸುರು ಕುಮಾರ ಕಂಚಿನ ಪದಕಕ್ಕೆ ತೃಪ್ತರಾದರು.