ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಮಳೆ ಅಬ್ಬರ ಮುಂದುವರೆದಿದ್ದು, ಅದರಲ್ಲೂ ರಾಜ್ಯ ರಾಜಧಾನಿಯಲ್ಲಿ ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ.
ಬುಧವಾರ ಹಾಗೂ ಗುರುವಾರದಂದು ಬೆಂಗಳೂರು ನಗರ ಪ್ರದೇಶದಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಇದರಿಂದಾಗಿ ಬೆಂಗಳೂರಿನ ಜನತೆ ಮಳೆ ಭೀತಿಯಲ್ಲೇ ಕಾಲ ಕಳೆಯುವಂತಾಗಿದೆ.
ಹಬ್ಬದ ಕಾರಣಕ್ಕೆ ರಜೆ ಇದ್ದದ್ದರಿಂದ ಮನೆಯಲ್ಲೇ ಇದ್ದ ಜನ ಇಂದಿನಿಂದ ಕಚೇರಿ ಆರಂಭವಾಗಿರುವುದರಿಂದ ಮಳೆಯಲ್ಲಿ ಹೇಗೆ ಹೋಗುವುದು ಎಂಬ ಚಿಂತೆಯಲ್ಲಿ ಇದ್ದಾರೆ.
ಅದರಲ್ಲೂ ಮಳೆ ಬೀಳುವ ಸಂದರ್ಭದಲ್ಲಿ ಟ್ರಾಫಿಕ್ ವಿಪರೀತ ಹೆಚ್ಚಳವಾಗಲಿದ್ದು, ವಾಹನ ಸಂಚಾರವೇ ದುಸ್ತರವಾಗಲಿದೆ. ಇದು ಅನಾಹುತಗಳಿಗೂ ಒಮ್ಮೊಮ್ಮೆ ಕಾರಣವಾಗಬಹುದು.