ಕಲಬುರಗಿ : ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಯಲ್ಲಿ ಎನ್ ವಿ ಗ್ರೌಂಡ್ನಲ್ಲಿ ನಡೆಯುತ್ತಿರುವ ಬಿಜೆಪಿ ಸಂಕಲ್ಪ ಸಮಾವೇಶದ ವೇದಿಕೆಗೆ ಆಗಮಿಸಿದ್ದು, ಕನ್ನಡದಲ್ಲೇ ಭಾಷಣ ಆರಂಭಿಸಿದ್ದಾರೆ.
ಬಸವೇಶ್ವರರ ನಾಡಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ್ದಾರೆ.ಸಮಾವೇಶಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಪೇಠ ತೊಡಿಸಿದರು. ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ಮೋದಿಗೆ ಕಂಬಳಿ ಶಾಲು ಹಾಕಿದರು. ಭಗವಂತ ಖೂಬಾ ಮತ್ತು ಸಂಸದ ಉಮೇಶ್ ಜಾಧವ್ ಅವರು ಮೋದಿ ಅವರಿಗೆ ಹಾರ ಹಾಕಿ ಸನ್ಮಾನಿಸಿದರು.
ತೆಲಂಗಾಣದಿಂದ ಸೇನಾ ಹೆಲಿಕಾಪ್ಟರ್ ಮೂಲಕ ಕಲಬುರಗಿಗೆ ಆಗಮಿಸಿದ್ದು, ಕನ್ನಡಿಗರು ಜೈ ಶ್ರೀ ರಾಮ್..ನಮೋ ನಮೋ ಎಂದು ಘೋಷಣೆಗಳನ್ನು ಕೂಗಿ ಸ್ವಾಗತ ಕೋರಿದ್ದಾರೆ.