ಕಲಬುರಗಿ : ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಬಾಣಂತಿ, ನವಜಾತ ಶಿಶು ಮೃತಪಟ್ಟ ಘಟನೆ ನಡೆದಿದೆ.
ಎಮ್ ಎಸ್ ಕೆ ಮಿಲ್ ಬಡಾವಣೆಯ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಸಭಾ ಪರ್ವಿನ್ ಎಂಬ ಗರ್ಭಿಣಿ ಮಹಿಳೆಯನ್ನು ಕುಟುಂಬದವರು ನಿನ್ನೆ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಇಂದು ಮಗು ಹಾಗೂ ತಾಯಿ ಮೃತಪಟ್ಟಿದೆ.
ವೈದ್ಯರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿ ಆಸ್ಪತ್ರೆ ಕಿಟಕಿ, ಬಾಗಿಲಿನ ಗಾಜು ಧ್ವಂಸಗೊಳಿಸಿದ್ದಾರೆ. ಹೆರಿಗೆ ಮಾಡಿಸುವ ಮುನ್ನವೇ ತಾಯಿ ಮಗು ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.