ರಾಯಚೂರು : ಮಾಂಸದೂಟ ಸೇವಿಸಿ 20 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಪುರಂಪುರ ತಾಂಡಾದಲ್ಲಿ ನಡೆದಿದೆ.
ದೇವರ ಕಾರ್ಯದ ಹಿನ್ನೆಲೆ ಮಾಂಸದೂಟ ಮಾಡಲಾಗಿತ್ತು, ಮಧ್ಯಾಹ್ನ ಮಾಂಸದೂಟ ಸೇವಿಸಿದ ಬಳಿಕ ಹಲವರಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ಕೂಡಲೇ ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.