
ಗಾಝಾ : ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ದಾಳಿ ಮುಂದುವರೆದಿದ್ದು, ಇಸ್ರೇಲ್ ಸೇನೆ ನಡೆಸಿದ ಏರ್ ಸ್ಟ್ರೈಕ್ ನಲ್ಲಿ 15 ಜನರು ಬಲಿಯಾಗಿದ್ದಾರೆ.
ಸೆಂಟ್ರಲ್ ಗಾಝಾ ತಡರಾತ್ರಿ ಇಸ್ರೇಲ್ ಸೇನೆ ಮೇಲೆ ಭಯಾನಕ ಬಾಂಬ್, ಮಿಸಲ್ ನಿಂದ ದಾಳಿ ನಡೆಸಿದೆ. ದಾಳಿಯಲ್ಲಿ 15 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ತುಂಡು ತುಂಡಾದ ಮೃತದೇಹಗಳನ್ನು ಹಿಡಿದು ಗಾಝಾ ಜನರು ಕಣ್ಣೀರು ಹಾಕುತ್ತಿದ್ದಾರೆ.
ದಿಯರ್ ಅಲ್ ಬಾಲಾದಲ್ಲೂ ಇಸ್ರೇಲ್ ದಾಳಿ ನಡೆಸಿದ್ದು, ಮನೆಗಳು ಹಾಗೂ ದೊಡ್ಡ ಬೇಕರಿ ಮೇಲೂ ಭಯಾನಕ ಬಾಂಬ್ ದಾಳಿ ನಡೆಸಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.