ಎಂಎಲ್ ಸಿ ರಾಜೇಂದ್ರ ಹತ್ಯೆಗೆ ಸಂಚು ರೂಪಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಆಡೀಯೋ ವೈರಲ್ ಆಗುತ್ತಿದ್ದಂತೆ ಸೋಮನ ಆಪ್ತೆ ಪುಷ್ಪಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆಡಿಯೋ ಹೇಳಿಕೆ ನೀಡಿದ್ದ ಸೋಮನ ಆಪ್ತೆ ಪುಷ್ಪಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ .
ಎಂಎಲ್ಸಿ ರಾಜೇಂದ್ರ ಹತ್ಯೆಗೆ ಸುಪಾರಿ ನೀಡಿದ ವಿಚಾರದ ಬಗ್ಗೆ ಆಡಿಯೋನಲ್ಲಿ ಕೇಳಿಬಂದಿರುವ ಪುಷ್ಪಾ ಎಂಬ ಮಹಿಳೆ ಸ್ಪೋಟಕ ಮಾಹಿತಿ ಹಂಚಿಕೊಂಡಿರುವುದು ಬಯಲಾಗಿದೆ. ಕಳೆದ ನವೆಂಬರ್ನಲ್ಲಿ ರಾಜೇಂದ್ರ ಅವರ ಮಗಳ ಬರ್ತ್ಡೇ ಡೆಕೋರೇಷನ್ಗೆ ಜೈಪುರದ ಇಬ್ಬರು ಹುಡುಗರು ಬಂದಿದ್ದರು. ಆ ಇಬ್ಬರನ್ನೂ ಸೋಮ ಕಳುಹಿಸಿದ್ದ, ಆಗಲೇ ಹತ್ಯೆಗೆ ಯತ್ನ ನಡೆದಿತ್ತು ಅಂತ ಆಡಿಯೋನಲ್ಲಿ ಪುಷ್ಪಾ ಮಾಹಿತಿ ನೀಡಿದ್ದಾಳೆ.
ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರ, ವಿಧಾನಪರಿಷತ್ ಸದಸ್ಯ ಆರ್. ರಾಜೇಂದ್ರ ಕೊಲೆಗೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಸೋಮ, ಭರತ್, ಅಮಿತ್, ಗುಂಡ, ಯತೀಶ್ ಎಂಬುವರ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ. ಅನಾಮಧೇಯ ಮೂಲಗಳಿಂದ ಸಿಕ್ಕ ಆಡಿಯೋದಲ್ಲಿ ರಾಜೇಂದ್ರ ಕೊಲೆಗೆ ಸುಫಾರಿ ಬಗ್ಗೆ ಮಾತುಕತೆ ನಡೆದಿದೆ. ಆರೋಪಿಗಳಾದ ಸೋಮ, ಭರತ್, ಅಮಿತ್, ಗುಂಡ ಹಾಗೂ ಯತೀಶ್ ಅವರು ವಿಧಾನಪರಿಷತ್ ಸದಸ್ಯ ರಾಜೇಂದ್ರ ಕೊಲೆಗೆ 70 ಲಕ್ಷಕ್ಕೆ ಡೀಲ್ ಕುದುರಿಸಿದ್ದು, 5 ಲಕ್ಷ ರೂಪಾಯಿ ಮುಂಗಡವಾಗಿ ಪಡೆದಿದ್ದರು ಎನ್ನಲಾಗಿದೆ.