ಬೆಂಗಳೂರು : ಶಾಸಕ ಶಿವಲಿಂಗೇಗೌಡರ ಕಾರಿಗೆ ಪೊಲೀಸ್ ಜೀಪ್ ಡಿಕ್ಕಿಯಾದ ಘಟನೆ ಶಾಸಕರ ಭವನದ ಬಳಿ ನಡೆದಿದೆ.
ಶಾಸಕರ ಭವನದ ಮುಂದೆ ನಿಂತಿದ್ದ ಶಿವಲಿಂಗೇಗೌಡರ ಇನ್ನೋವಾ ಕಾರಿಗೆ ಪೊಲೀಸ್ ಜೀಪ್ ಡಿಕ್ಕಿಯಾಗಿದೆ. ಜೀಪ್ ಡಿಕ್ಕಿಯಾದ ಪರಿಣಾಮ ಏರ್ ಬಲೂನ್ ಓಪನ್ ಆಗಿದ್ದು, ಶಾಸಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪೊಲೀಸ್ ಜೀಪ್ ಡಿಕ್ಕಿಯಾದ ಪರಿಣಾಮ ಕಾರಿನ ಮುಂಭಾಗ ಜಖಂ ಆಗಿದೆ. ಶಿವಲಿಂಗೇಗೌಡರು ಸಣ್ಣಪುಟ್ಟ ತರಚಿದ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಪೊಲೀಸ್ ಜೀಪ್ ಓಡಿಸುತ್ತಿದ್ದ ಕಾನ್ಸ್ ಟೇಬಲ್ ಅಜಾಗರೂಕತೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗದೆ. ಶಾಸಕರ ಭವನದ ಮುಂದೆ ನಿಂತಿದ್ದ ಇನ್ನೋವಾ ಕಾರಿಗೆ ಪೊಲೀಸ್ ಜೀಪ್ ಡಿಕ್ಕಿ ಹೊಡೆದಿದೆ.