ಬೆಳಗಾವಿ : ಸಚಿವ ಭೈರತಿ ಸುರೇಶ್ ಕಾರು ಅಪಘಾತಕ್ಕೀಡಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ಸುವರ್ಣಸೌಧದ ಪಶ್ಚಿಮ ಧ್ವಾರದ ಬಳಿ ಈ ಘಟನೆ ನಡೆದಿದೆ. ಎಸ್ಕಾರ್ಟ್ ವಾಹನ ಸಚಿವ ಭೈರತಿ ಸುರೇಶ್ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯಿಂದ ಗಲಿಬಿಲಿಗೊಂಡ ಸಚಿವರು ಎಸ್ಕಾರ್ಟ್ ವಾಹನದ ಚಾಲಕ ಹಾಗೂ ಪೊಲೀಸರಿಗೆ ತರಾಟೆ ತೆಗೆದುಕೊಂಡರು. ಅದೃಷ್ಟವಶಾತ್ ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ.