ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ಹಿಂದೆ ಉಗ್ರರ ಕೈವಾಡ ಇದೆ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಸೀನಾ ಶೇಖ್ ಪುತ್ರ ಸಾಜಿಬ್ ವಾಜಿದ್ ಹೇಳಿಕೆ ನೀಡಿದ್ದಾರೆ. ಬಾಂಗ್ಲಾದೇಶದ ಪ್ರಧಾನಿ ಹಸೀನಾ ಶೇಖ್ ರಾಜೀನಾಮೆಗೆ ಒತ್ತಾಯಿಸಿ ಜನರು ಭಾರಿ ಹಿಂಸಾಚಾರ ನಡೆಸಿದ್ದರು.
ನಮ್ಮ ತಾಯಿ ಹಸೀನಾ ಶೇಖ್ ದೇಶವನ್ನು ತೊರೆದಿದ್ದಾರೆ. ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ. ಮತ್ತೆ ಯಾವತ್ತೂ ಕೂಡ ರಾಜಕೀಯಕ್ಕೆ ಬರುವುದಿಲ್ಲ. ಸುರಕ್ಷತೆ ದೃಷ್ಟಿಯಿಂದ ನಮ್ಮ ತಾಯಿ ದೇಶವನ್ನು ತೊರೆದಿದ್ದಾರೆ ಎಂದು ಸಾಜಿಬ್ ವಾಜಿದ್ ಹೇಳಿಕೆ ನೀಡಿದ್ದಾರೆ.
15 ವರ್ಷಗಳ ಆಡಳಿತವನ್ನು ಕೊನೆಗೊಳಿಸಿ ಸೋಮವಾರ ರಾಜೀನಾಮೆ ನೀಡಿದ ಶೇಖ್ ಹಸೀನಾ ಅವರು ಸಿ -130 ಸೇನೆ ವಿಮಾನದಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್ನ ಹಿಂಡನ್ ವಾಯುನೆಲೆಗೆ ಆಗಮಿಸಿದರು. ಹಸೀನಾ ಅವರನ್ನು ಭಾರತದ ಸುರಕ್ಷಿತ ಮನೆಗೆ ಸ್ಥಳಾಂತರಿಸಲಾಗಿದೆ.ಯುಕೆ ಪೌರತ್ವ ಹೊಂದಿರುವ ಶೇಖ್ ಹಸೀನಾ ಅವರ ಸಹೋದರಿ ರೆಹಾನಾ ಅವರೊಂದಿಗೆ ಇದ್ದಾರೆ ಎಂದು ಮಾಧ್ಯಮ ವರದಿಗಳು ಸೂಚಿಸಿವೆ.