
ಹೌಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಸ್ಪರ್ಧಿಗಳ ಭರ್ಜರಿ ಪ್ರದರ್ಶನ ಮುಂದುವರೆದಿದ್ದು, ಇಂದು ನಡೆದ ಪುರುಷರ ದೋಣಿ ಡಬಲ್ 500 ಮೀಟರ್ ಸ್ಪರ್ಧೆಯಲ್ಲಿ ಭಾರತ ಸೆಮಿಫೈನಲ್ ಗೆ ಎಂಟ್ರಿ ಕೊಟ್ಟಿದೆ.
ಪುರುಷರ ದೋಣಿ ಡಬಲ್ 500 ಮೀಟರ್ ಸ್ಪರ್ಧೆಯಲ್ಲಿ ಭಾರತದ ಜ್ಞಾನೇಶ್ವರ್ ಸಿಂಗ್ ಮತ್ತು ರಿಬಾಸನ್ ಸಿಂಗ್ ಜೋಡಿ 4ನೇ ಸ್ಥಾನ ಪಡೆದು ಸೆಮಿಫೈನಲ್ ಗೆ ಅರ್ಹತೆ ಪಡೆಯಿತು. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ಖಚಿತ ಪಡಿಸಿದ್ದಾರೆ.