ಉತ್ತರ ಪ್ರದೇಶ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ದಳದ ವಾಹನಗಳು ಹರಸಾಹಸ ಪಡುತ್ತಿದೆ.
ಸೆಕ್ಟರ್ 65 ರ ಎ -113 ರಲ್ಲಿರುವ ಕಂಪನಿಯಲ್ಲಿ ಬೆಂಕಿಯ ಬಗ್ಗೆ ಬೆಳಿಗ್ಗೆ 8 ಗಂಟೆಗೆ ಮಾಹಿತಿ ಬಂದಿದ್ದು, ನಂತರ ಅಗ್ನಿಶಾಮಕ ಇಲಾಖೆ 17 ವಾಹನಗಳನ್ನು ಸ್ಥಳಕ್ಕೆ ಕಳುಹಿಸಿದೆ ಎಂದು ಉಪ ಪೊಲೀಸ್ ಆಯುಕ್ತ (ವಲಯ 2) ಶಕ್ತಿ ಮೋಹನ್ ಅವಸ್ಥಿ ತಿಳಿಸಿದ್ದಾರೆ.
ಸುಮಾರು 100 ಅಗ್ನಿಶಾಮಕ ಸಿಬ್ಬಂದಿಯ ಪ್ರಯತ್ನದಿಂದಾಗಿ ಐದು ಗಂಟೆಗಳ ನಂತರ ಬೆಂಕಿಯನ್ನು ನಿಯಂತ್ರಿಸಲಾಯಿತು, ಒಟ್ಟು ಹಾನಿಯನ್ನು ಇನ್ನೂ ಅಂದಾಜಿಸಲಾಗುತ್ತಿದೆ ಎಂದು ಅವರು ಹೇಳಿದರು.
VIDEO | Fire breaks out in a private hospital in #GreaterNoida. More details area awaited.
(Source: Third Party)
(Full video available on PTI Videos – https://t.co/n147TvrpG7) pic.twitter.com/6WoL5JEjM3
— Press Trust of India (@PTI_News) December 26, 2024