ಬೆಂಗಳೂರು : ರಾಜ್ಯದಲ್ಲಿ ವಿವಾಹ ನೋಂದಣಿ ಈಗ ಮತ್ತಷ್ಟು ಸುಲಭವಾಗಿದ್ದು, ಆನ್ ಲೈನ್ ನಲ್ಲಿ ಎಲ್ಲಾ ದಾಖಲೆಗಳನ್ನು ಅಪ್ ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.
ಇದುವರೆಗೆ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮಾತ್ರ ವಿವಾಹ ನೋಂದಣಿಯನ್ನು ಕೈಗೊಳ್ಳಲಾಗುತ್ತಿತ್ತು. ಆದರೆ, ರಾಜ್ಯ ಸರ್ಕಾರ ಈ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸಿದೆ. ಉಪ ನೋಂದಣಾಧಿಕಾರಿಗಳ ಕಚೇರಿಗೆ ಅಲೆದಾಟ ತಪ್ಪಿಸಲು ಆನ್ ಲೈನ್ ವ್ಯವಸ್ಥೆ ಮಾಡಿದೆ. ಅರ್ಜಿ ಸಲ್ಲಿಸಿದ ಬಳಿಕ ನಿಮಗೆ MARRIAGE ಸರ್ಟಿಫೀಕೇಟ್ ಸಿಗಲಿದೆ.
ವಿವಾಹ ನೋಂದಣಿಯನ್ನು ಜನಸ್ನೇಹಿಯಾಗಿಸಲು ಕಾವೇರಿ 2.0 ತಂತ್ರಾಂಶದಲ್ಲಿ ಆನ್ಲೈನ್ ಮೂಲಕ ನೋಂದಣಿ ಮಾಡಲು ಮತ್ತು ಗ್ರಾಮ ಪಂಚಾಯಿತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ-1 ಕೇಂದ್ರಗಳಲ್ಲಿಯೂ ಸಹ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಿದೆ.
https://kaveri.karnataka.gov.in ಭೇಟಿ ನೀಡಿ ಮತ್ತು ಬಳಕೆದಾರರ ಖಾತೆ ಸೃಜಿಸಿ ಕಾವೇರಿ ಪೋರ್ಟಲ್ಗೆ ಲಾಗಿನ್ ಮಾಡಿ, ವಿವಾಹ ನೋಂದಣಿ ಸೇವೆ ಆಯ್ಕೆಮಾಡಿ ಮತ್ತು ವಿವರ ನಮೂದಿಸಿ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸುವ ಹಂತಗಳು
1) ಮೊದಲು https://kaveri.karnataka.gov.in ಭೇಟಿ ನೀಡಿ ಮತ್ತು ಬಳಕೆದಾರರ ಖಾತೆ ಸೃಜಿಸಿ
2) ಕಾವೇರಿ ಪೋರ್ಟಲ್ಗೆ ಲಾಗಿನ್ ಮಾಡಿ, ವಿವಾಹ ನೋಂದಣಿ ಸೇವೆ ಆಯ್ಕೆಮಾಡಿ ಮತ್ತು ವಿವರ ನಮೂದಿಸಿ ಅರ್ಜಿ ಸಲ್ಲಿಸಿ
3) ಗಂಡ, ಹೆಂಡತಿ ಮತ್ತು ಮೂರು ಸಾಕ್ಷಿದಾರರ ಆಧಾರ್ ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಿ
4) ನೋಂದಣಾಧಿಕಾರಿಯಿಂದ ಅರ್ಜಿ ಪರಿಶೀಲನೆ, ಆನ್ಲೈನ್ ಮೂಲಕ ಶುಲ್ಕ ಸಂದಾಯಕ್ಕೆ ಅವಕಾಶ
5) ಕಾವೇರಿ ಪೋರ್ಟಲ್ನಲ್ಲಿ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಿ
( https://kaveri.karnataka.gov.in) ಹೆಚ್ಚಿನ ಮಾಹಿತಿಗಾಗಿ 080 68265316 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಅರ್ಜಿ ಸಲ್ಲಿಸಲು ಏನೆಲ್ಲಾ ದಾಖಲೆ ಬೇಕು..?
1) ವಿವಾಹ ಆಮಂತ್ರಣ ಪತ್ರಿಕೆ ( ಗಂಡು, ಹೆಣ್ಣಿನ ಮನೆಯದ್ದು)
2) ಆಧಾರ್ ಕಾರ್ಡ್ ( ಗಂಡು, ಹೆಣ್ಣು)
3) ವಧು-ವರರ ಮನೆಯವರ (ಸಾಕ್ಷಿದಾರರು) ಆಧಾರ್ ಕಾರ್ಡ್
4) ವಧು-ವರರ ಫೋಟೋ
5) ಸಾಕ್ಷಿದಾರರ ಮೊಬೈಲ್ ಸಂಖ್ಯೆ ( ಒಟಿಪಿ)