alex Certify BIG BREAKING: ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಸ್ಪೋಟ, 7 ಹೊಸ ಪ್ರಕರಣ ಸೇರಿ 17 ಕ್ಕೇರಿದ ಸೋಂಕಿತರ ಸಂಖ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಸ್ಪೋಟ, 7 ಹೊಸ ಪ್ರಕರಣ ಸೇರಿ 17 ಕ್ಕೇರಿದ ಸೋಂಕಿತರ ಸಂಖ್ಯೆ

ನವದೆಹಲಿ: ಮಹಾರಾಷ್ಟ್ರದಲ್ಲಿ ಶುಕ್ರವಾರ 7 ಹೊಸ ಕೊರೋನಾ ವೈರಸ್ ರೂಪಾಂತರದ ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ತಿಳಿಸಿದೆ.

ರೋಗಿಗಳಲ್ಲಿ ಮೂವರು ಮುಂಬೈ ಮತ್ತು 4 ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಶನ್‌ ನಿವಾಸಿಗಳಾಗಿದ್ದಾರೆ. ಇದರೊಂದಿಗೆ ಮಹಾರಾಷ್ಟ್ರದ ಒಮಿಕ್ರಾನ್ ಸೋಂಕಿತರ ಸಂಖ್ಯೆ 17 ಕ್ಕೆ ಏರಿಕೆಯಾಗಿದೆ.

ಮುಂಬೈನ ಧಾರಾವಿ ನಿವಾಸಿ ತಾಂಜೇನಿಯಾದಿಂದ ಹಿಂದಿರುಗಿದ್ದು, ಸೆವೆನ್ ಹಿಲ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಲಸಿಕೆ ಹಾಕದ ವ್ಯಕ್ತಿಯಲ್ಲಿ ಒಮಿಕ್ರಾನ್ ಪ್ರಕರಣ ವರದಿ ಮಾಡಿದ ಗಂಟೆಗಳ ನಂತರ ಇದು ವರದಿಯಾಗಿದೆ.

ರೋಗಿಯ ಆರೋಗ್ಯದ ಕುರಿತು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (BMC) ಮಾಹಿತಿ ನೀಡಿ, ರೋಗಿಯು ಲಕ್ಷಣರಹಿತವಾಗಿದ್ದಾರೆ. ಲಸಿಕೆ ಪಡೆದಿಲ್ಲ ಎಂದು ಹೇಳಿದೆ.

ಮಹಾರಾಷ್ಟ್ರದಲ್ಲಿ ಶುಕ್ರವಾರ 695 ಹೊಸ ಕೊರೋನಾ ಪ್ರಕರಣಗಳು, 631 ಚೇತರಿಕೆಗಳು ಮತ್ತು 12 ಸಾವುಗಳು ವರದಿಯಾಗಿವೆ. 6,534 ಸಕ್ರಿಯ ಕೋವಿಡ್ ಪ್ರಕರಣಗಳಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...