ಮಹಾದೇವ್ ಆ್ಯಪ್ ಬೆಟ್ಟಿಂಗ್ ಹಗರಣದ ಮಾಸ್ಟರ್ ಮೈಂಡ್ ಸೌರಭ್ ಚಂದ್ರಕರ್ ರನ್ನು ದುಬೈನಲ್ಲಿ ಬಂಧಿಸಲಾಗಿದೆ.
ಮಹಾದೇವ್ ಬೆಟ್ಟಿಂಗ್ ಹಗರಣದ ಪ್ರವರ್ತಕ ಸೌರಭ್ ಚಂದ್ರಕರ್ ಅವರನ್ನು ದುಬೈನಲ್ಲಿ ಶುಕ್ರವಾರ ಬಂಧಿಸಲಾಗಿದೆ. ಜಾರಿ ನಿರ್ದೇಶನಾಲಯದ (ಇಡಿ) ಕೋರಿಕೆಯ ಮೇರೆಗೆ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ. ಜಾರಿ ನಿರ್ದೇಶನಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಮತ್ತು ಗೃಹ ಸಚಿವಾಲಯ (ಎಂಎಚ್ಎ) ದೊಂದಿಗೆ ಈ ಪ್ರಕರಣದಲ್ಲಿ ಪ್ರಮುಖ ಕಾರ್ಯಾಚರಣೆ ನಡೆದಿದೆ.
ಅಧಿಕಾರಿಗಳ ಪ್ರಕಾರ, ಯುಎಇ ಅಧಿಕಾರಿಗಳು ನಿನ್ನೆ ಅಧಿಕೃತವಾಗಿ ವಿದೇಶಾಂಗ ಸಚಿವಾಲಯದೊಂದಿಗೆ (ಎಂಇಎ) ಸಂವಹನ ನಡೆಸಿದ್ದು, ದುಬೈನಲ್ಲಿ ಸೌರಭ್ ಚಂದ್ರಕರ್ ಬಂಧನದ ಬಗ್ಗೆ ಮಾಹಿತಿ ನೀಡಿದ್ದಾರೆ.