ವನೌಟು ರಾಜಧಾನಿ ಪೋರ್ಟ್ ವಿಲಾದಲ್ಲಿ ಮಂಗಳವಾರ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) ತಿಳಿಸಿದೆ.
ಭೂಕಂಪನವು 10 ಕಿ.ಮೀ (6.21 ಮೈಲಿ) ಆಳದಲ್ಲಿತ್ತು ಎಂದು ಯುಎಸ್ಜಿಎಸ್ ತಿಳಿಸಿದೆ. ರಾಜಧಾನಿಯಲ್ಲಿ ವಿದೇಶಿ ರಾಯಭಾರ ಕಚೇರಿಗಳನ್ನು ಹೊಂದಿರುವ ಕಟ್ಟಡದ ಕಿಟಕಿಗಳು ಮತ್ತು ಕಾಂಕ್ರೀಟ್ ಕಂಬಗಳು ಕುಸಿದಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ದೃಶ್ಯಾವಳಿಗಳು ತೋರಿಸಿವೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಮೂಲಗಳು ಮಾಹಿತಿ ನೀಡಿದೆ.
🇻🇺 #BREAKING A powerful 7.4 magnitude earthquake struck Vanuatu on December 17, 2024, causing damaged US Embassy
Initial reports indicate significant damage to infrastructure, homes, and buildings.#earthquake #Vanuatu pic.twitter.com/MlPdnPBM74
— Weather monitor (@Weathermonitors) December 17, 2024