ಹಾವೇರಿ : ಪ್ರೀತಿಸಿದ ಹುಡುಗಿ ಮತ್ತೋರ್ವ ಯುವಕನ ಜೊತೆ ಲವ್ವಿಡವ್ವಿ ನಡೆಸಿದ್ದು, ಮನನೊಂದ ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ನಡೆದಿದೆ.
ಶಶಿಧರ್ (23) ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರೇಮ ವೈಫಲ್ಯವೇ ಇದಕ್ಕೆ ಕಾರಣ ಎನ್ನಲಾಗಿದೆ.
ಶಶಿಧರ್ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದನು. ಇಬ್ಬರು ಕೂಡ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿ ನಾನು ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ, ನನಗೆ ನೀನು ಬೇಡ ಎಂದು ತಿರಸ್ಕರಿಸಿದ್ದಾಳೆ. ಅಲ್ಲದೇ ಆ ಹುಡುಗನ ಜೊತೆ ಪಾರ್ಕ್ ಎಲ್ಲಾ ಸುತ್ತಾಡಿದ್ದಾಳೆ. ಇದರಿಂದ ಮನನೊಂದ ಯುವಕ ಸೂಸೈಡ್ ಮಾಡಿಕೊಂಡಿದ್ದಾನೆ.
ಶಶಿಧರ್ ತಾಯಿ ಹುಲಿಗೆಮ್ಮ ಬ್ಯಾಡಗಿ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.