ಬೆಂಗಳೂರು : ಕೈಯಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ ಬಿಗ್ ಬಾಸ್ ಮಾಜಿ ಸ್ಪರ್ಧಿ ವಿನಯ್ ಗೌಡ, ರಜತ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಇದೀಗ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ವಿಚಾರಣೆಗೆ ಬಂದು ಹೇಳಿಕೆ ದಾಖಲಿಸುವಂತೆ ಬಸವೇಶ್ವರನಗರ ಪೊಲೀಸರು ಪೊಲೀಸರು ಸೂಚನೆ ನೀಡಿದ್ದಾರೆ . ಸದ್ಯ ರಜತ್ ಹಾಗೂ ವಿನಯ್ ಗೌಡ ಪರಿಸ್ಥಿತಿ ಇರಲಾರದೇ ಇರುವೆ ಬಿಟ್ಟುಕೊಂಡ ಹಾಗೆ ಆಗಿದೆ.
ಲಾಂಗ್ ಹಿಡಿದು ವಿಡಿಯೋ ಮಾಡಿದ ಹಿನ್ನೆಲೆಯಲ್ಲಿ ಇವರಿಬ್ಬರ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿತ್ತು. ವಿನಯ್ ಗೌಡ ಹಾಗೂ ರಜತ್ ಇಬ್ಬರೂ ಹೆಚ್ಚು ಕಡಿಮೆ ಒಂದೇ ಕಾಸ್ಟ್ಯೂಮ್ನಲ್ಲಿ ಕೈಯಲ್ಲಿ ನಕಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ಆ ರೀಲ್ಸ್ ಅನ್ನು ರಜತ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದರು.ಸೋಶಿಯಲ್ ಮೀಡಿಯಾಗಳಲ್ಲಿ ಲಾಂಗ್, ಮಚ್ಚು, ಗನ್, ಬಂದೂಕು ಹಿಡಿದು ರೀಲ್ಸ್ ಮಾಡುವುದು ಅಪರಾಧವಾಗಿದೆ.