ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಆತಂಕ ಸೃಷ್ಟಿಯಾಗಿದೆ.
ಎಲೆಕ್ಟ್ರಾನಿಕ್ ಸಿಟಿಯ ಫಸ್ಟ್ ಪೇಜ್ ಟೋಲ್ ಪ್ಲಾಜಾ ಬಳಿ ಚಿರತೆ ಓಡಾಡಿದೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಳೆದ ವಾರ ಜಿಗಣಿ ಸುತ್ತಾಮುತ್ತಾ ಚಿರತೆ ಕಾಣಿಸಿಕೊಂಡಿತ್ತು, ಇದೀಗ ಎಲೆಕ್ಟ್ರಾನಿಕ್ ಸಿಟಿಯ ಫಸ್ಟ್ ಪೇಜ್ ಟೋಲ್ ಪ್ಲಾಜಾ ಬಳಿ ಚಿರತೆ ಓಡಾಡಿದೆ. ಚಿರತೆ ಪ್ರತ್ಯಕ್ಷವಾದ ಹಿನ್ನೆಲೆ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.