ತನ್ನ 390 ಅಡ್ವೆಂಚರ್ ಸರಣಿಗೆ ಹೊಸ ಮಾಡೆಲ್ ಅನ್ನು ಸೇರಿಸಿರುವ ಕೆಟಿಎಂ, ಇದನ್ನು ಭಾರತದಲ್ಲಿರುವ ತನ್ನ ವೆಬ್‌ಸೈಟ್‌ನಲ್ಲಿ 390 ಅಡ್ವೆಂಚರ್ ಎಕ್ಸ್ ಎಂದು ಕರೆದಿದೆ.
ಈ ಹೊಸ ಮಾಡೆಲ್‌ನ ಬೆಲೆ ಏನೆಂದು ಆಸ್ಟ್ರಿಯಾದ ಬೈಕ್ ಕಂಪನಿ ಇನ್ನೂ ತಿಳಿಸಿಲ್ಲ. ಮೇಲ್ಕಂಡ ಸರಣಿಯ ಸ್ಟಾಂಡರ್ಡ್ ವರ್ಶನ್‌ನ ಬೆಲೆಯು 3,37,043 ರೂ. ಇದ್ದು, ಹೊಸ ಬೈಕ್ ಇದಕ್ಕಿಂತ ಸ್ವಲ್ಪ ಕಡಿಮೆ ಬೆಲೆ ಹೊಂದಿರುವ ಸಾಧ್ಯತೆ ಇದೆ.
ಎಲ್‌ಸಿಡಿ ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಹೊಂದಿರುವ 390 ಅಡ್ವೆಂಚರ್ ಎಕ್ಸ್‌ಗೆ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಸಹ ಸಿಗಲಿದೆ. ಇದೇ ವೇಳೆ, ಸ್ವಿಚಬಲ್ ಡ್ಯುಯಲ್-ಚಾನೆಲ್ ಎಬಿಎಸ್‌ನೊಂದಿಗೆ ಮುಂದುವೆಯಲಿರುವ ಈ ಹೊಸ ಸೇರ್ಪಡೆಯಲ್ಲಿ ಟ್ರಾಕ್ಷನ್ ನಿಯಂತ್ರಣ ವ್ಯವಸ್ಥೆ, ರೈಡ್-ಬೈ-ವೈರ್, ಕ್ವಿಕ್‌ಶಿಫ್ಟರ್ ಹಾಗೂ ಕಾರ್ನರಿಂಗ್ ಎಬಿಎಸ್‌ಗಳು ಇರುವುದಿಲ್ಲ.
373.2 ಸಿಸಿ ಲಿಕ್ವಿಡ್ ಕೂಲ್ಡ್ ಇಂಜಿನ್‌ನೊಂದಿಗೆ 43 ಪಿಎಸ್ ಮತ್ತು 37 ಎನ್‌ಎಂ ಶಕ್ತಿ ಉತ್ಪಾದನೆ ಮಾಡಬಲ್ಲದು ಈ ಹೊಸ ಬೈಕ್. ಉಳಿದಂತೆ ಸಸ್ಪೆಂಶನ್ ವ್ಯವಸ್ಥೆ, ಚಕ್ರಗಳು, ಗಾಲಿಗಳು, ಬಣ್ಣದ ಆಯ್ಕೆಗಳು (ಡಾರ್ಕ್ ಗಲ್ವಾನೋ ಬ್ಲಾಕ್ ಮತ್ತು ರೇಸಿಂಗ್ ಬ್ಲೂ ) ಎಲ್ಲವೂ ಸಹ 390 ಅಡ್ವೆಂಚರ್ ಸರಣಿಯ ಸ್ಟಾಂಡರ್ಡ್ ಮಟ್ಟಗಳಲ್ಲೇ ಇವೆ.
250 ಅಡ್ವೆಂಚರ್ ಸರಣಿಯತ್ತ ಚಿತ್ತ ನೆಟ್ಟಿದ್ದ ಗ್ರಾಹಕರಿಗೆ 390 ಸರಣಿಯ ಈ ಹೊಸ ಬೈಕ್ ಗಮನ ಸೆಳೆಯುವ ನಿರೀಕ್ಷೆ ಇದೆ.