ಕನಕಪುರ : ತಡೆಗೋಡೆಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿದ್ದು, ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ.
ಬಸ್ ನಲ್ಲಿ 110 ಪ್ರಯಾಣಿಕರು ಜಸ್ಟ್ ಮಿಸ್ ಆಗಿದ್ದಾರೆ. ಕನಕಪುರದ ಸಂಗಮಘಾಟ್ ಬಳಿ ಕೆಎಸ್ ಆರ್ ಟಿಸಿ ಬಸ್ ನ ಬ್ರೇಕ್ ಫೇಲ್ ಆಗಿದ್ದು, ತಡೆಗೋಡೆಗೆ ಡಿಕ್ಕಿಯಾಗಿ ಬಸ್ ನಿಂತಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಒಂದು ವೇಳೆ ಪ್ರಪಾತಕ್ಕೆ ಬಸ್ ಉರುಳಿ ಬಿದ್ದಿದ್ರೆ ಯಾವ ಪ್ರಯಾಣಿಕರು ಕೂಡ ಬದುಕುಳಿಯುತ್ತಿರಲಿಲ್ಲ. ಹೊಸ ವರ್ಷದ ದಿನವೇ ಘಟನೆ ನಡೆದಿದ್ದು, ಭಾರಿ ದುರಂತವೊಂದು ತಪ್ಪಿದೆ.