ಮಂಡ್ಯ: ಚಲಿಸುತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಿಂದ ಬಿದ್ದು ಪ್ರಯಾಣಿಕರೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿಯಲ್ಲಿ ನಡೆದಿದೆ.
ಚಲುವೇಗೌಡ ಮೃತ ಪ್ರಯಾಣಿಕ. ಬಸ್ ರಷ್ ಇದ್ದ ಕಾರಣ, ಮೆಟ್ಟಿಲ ಮೇಲೆ ನಿಂತಿದ್ದ ಪ್ರಯಾಣಿಕ, ಬಸ್ ಚಲಿಸುತ್ತಿದ್ದಂತೆ ಆಯತಪ್ಪಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕೆ.ಎಸ್.ಆರ್.ಟಿ.ಸಿ ಬಸ್, ಜಕ್ಕನಹಳ್ಳಿಯಿಂದ ಮಂಡ್ಯದ ಕಡೆಗೆ ತೆರಳುತ್ತಿದ್ದು, ಈ ವೇಳೆ ದುರಂತ ಸಂಭವಿಸಿದೆ.