ಬೆಂಗಳೂರು : ಕರ್ನಾಟಕ ಪರೀಕ್ಷೆ ಪ್ರಾಧಿಕಾರದ ವತಿಯಿಂದ ಜನವರಿ 13 ರಂದು ನಡೆದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (K-SET) ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರ ಪ್ರಕಟವಾಗಿದೆ.
ಪರೀಕ್ಷೆ ಬರೆದ ಅಭ್ಯರ್ಥಿಗಳು ಇದೀಗ ಕೆಇಎ ವೆಬ್ಸೈಟ್ನಲ್ಲಿ ಚೆಕ್ ಮಾಡಿಕೊಳ್ಳಬಹುದು , ತಾತ್ಕಾಲಿಕ ಕೀ ಉತ್ತರಗಳಿಗೆ ಆಕ್ಷೇಪಣೆ ಇದ್ದಲ್ಲಿ ಅಗತ್ಯ ಪೂರಕ ದಾಖಲೆಗಳನ್ನು ಲಗತ್ತಿಸುವ ಮೂಲಕ ಆಕ್ಷೇಪಣೆ ಸಲ್ಲಿಸಬೇಕು.
ತಾತ್ಕಾಲಿಕ ಸರಿಯುತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಕೊನೆ ದಿನಾಂಕ: 07-02-2024 ಆಗಿದೆ.
ಚೆಕ್ ಮಾಡುವುದು ಹೇಗೆ?
1) ಮೊದಲು ಕೆಇಎ ವೆಬ್ ಪೋರ್ಟಲ್ https://cetonline.karnataka.gov.in ಗೆ ಭೇಟಿ ನೀಡಿ.
2) ‘ಪ್ರವೇಶ >> ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ 2023’ ಆಯ್ಕೆ ಮಾಡಿ ಕ್ಲಿಕ್ ಮಾಡಿ.
3) ನಂತರ ‘KSET ತಾತ್ಕಾಲಿಕ ಕೀ ಉತ್ತರಗಳು’ ಎಂಬುದರ ಮೇಲೆ ಕ್ಲಿಕ್ ಮಾಡಿ.
4) ನಂತರ ತಾತ್ಕಾಲಿಕ ಕೀ ಉತ್ತರಗಳ ಲಿಂಕ್ ಬರುತ್ತದೆ.
5) ನೀವು ಪರೀಕ್ಷೆ ಬರೆದ ವಿಷಯದ ಕೀ ಉತ್ತರ ಲಿಂಕ್ ಮೇಲೆ ಕ್ಲಿಕ್ ಮಾಡಿ.
6) ಪಿಡಿಎಫ್ ಪುಟವೊಂದು ಓಪನ್ ಆಗುತ್ತದೆ, ಈ ಮೂಲಕ ಕೀ ಉತ್ತರ ಪರಿಶೀಲಿಸಿಕೊಳ್ಳಬಹುದು.