ಬೆಂಗಳೂರು : ‘KPSC’ ಯ ಗ್ರೂಪ್ ಬಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿದ್ದು, ಅಭ್ಯರ್ಥಿಗಳು ವೇಶ ಪತ್ರ ಡೌನ್ ಲೋಡ್ ಮಾಡಬಹುದಾಗಿದೆ.
ವಿವಿಧ ಇಲಾಖೆಗಳಲ್ಲಿನ ಹುದ್ದೆಗಳಿಗೆ, ಪತ್ರಿಕೆ-1: ಸಾಮಾನ್ಯ ಪತ್ರಿಕೆಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ದಿನಾಂಕ 19-01-2025 ರಂದು ಮತ್ತು ಪತ್ರಿಕೆ-2: ನಿರ್ದಿಷ್ಟ ಪತ್ರಿಕೆಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ದಿನಾಂಕ 25-01-2025 ರಂದು ನಡೆಸಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಆಯೋಗದ ವೆಬ್ ಸೈಟ್ http://kpsc.kar.nic.in ರ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.
ಪ್ರವೇಶ ಪತ್ರ ಹೀಗೆ ಡೌನ್ಲೋಡ್ ಮಾಡಿ
– ಮೊದಲು ಕೆಪಿಎಸ್ಸಿ ವೆಬ್ಸೈಟ್ https://kpsconline.karnataka.gov.in ಗೆ ಭೇಟಿ ನೀಡಿ.
– ತೆರೆದ ವೆಬ್ಪೇಜ್ನಲ್ಲಿ ‘Login’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ಯೂಸರ್ನೇಮ್ ಹಾಗೂ ಪಾಸ್ವಾರ್ಡ್ ನೀಡಿ ಲಾಗಿನ್ ಆಗಿ.
– ಪರೀಕ್ಷೆ ಆಯ್ಕೆ ಮಾಡಿ, ನಂತರ ಪ್ರವೇಶ ಪತ್ರ ಡೌನ್ಲೋಡ್ ಆಯ್ಕೆ ಮಾಡಿ ಕ್ಲಿಕ್ ಮಾಡಿ.
– ಡೌನ್ಲೋಡ್ ಮಾಡಿದ ಪ್ರವೇಶ ಪತ್ರ ಪ್ರಿಂಟ್ ತೆಗೆದುಕೊಳ್ಳಿ.