ಮೈಸೂರು : ಮೈಸೂರಿನಲ್ಲಿ ಹಾಡಹಗಲೇ ಕೇರಳ ಮೂಲದ ಉದ್ಯಮಿ ಕಾರನ್ನು ಅಡ್ಡಗಟ್ಟಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೇರಳದ ತ್ರಿಶೂರಿನ್ ರಜಿನ್ ಹಾಗೂ ಪ್ರಮೋದ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಉದ್ಯಮಿ ಅಶ್ರಫ್ ಅಹ್ಮದ್ ಹಾಗೂ ಅವರ ಕಾರು ಚಾಲಕ ಸೂಫಿ ಎಂಬುವವರ ಕಾರನ್ನು ಹೆಚ್.ಡಿ.ಕೋಟೆ ಬಳಿಯ ಹಾರೋಹಳ್ಳಿ ಬಳಿ ಅಡ್ಡಗಟ್ಟಿದ್ದ ದರೋಡೆಕೋರರ ಗ್ಯಾಂಗ್, ಕಾರಿನಿಂದ ಅವರನ್ನು ಕೆಳಗಿಳಿಸಿ, ಹಲ್ಲೆ ನಡೆಸಿ ಹಣ ಹಾಗೂ ಕಾರಿನ ಸಮೇತ ಎಸ್ಕೇಪ್ ಆಗಿದ್ದರು.
ಸುಮಾರು 12 ಕೀ.ಮೀ ದೂರದಲ್ಲಿ ಉದ್ಯಮಿಯ ಕಾರನ್ನು ಬಿಟ್ಟು, ಅದರಲ್ಲಿದ್ದ 1.5 ಲಕ್ಷ ಹಣ ದೋಚಿ ಪರಾರಿಯಾಗಿದ್ದಾರೆ. ಉದ್ಯಮಿ ಕಾರು ಮಾಂಬಳ್ಳಿ ಬಳಿ ಪತ್ತೆಯಾಗಿದೆ. ಇನ್ನೊಂದು ಕಾರು ಗೋಪಾಲ್ ಪುರ ಬಳಿ ಪತ್ತೆಯಾಗಿದೆ. ಎರಡೂ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.