ಬೆಂಗಳೂರು : ‘KEA’ ಸೀಟುಗಳ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೆಇಎ ಆಡಳಿತಾಧಿಕಾರಿ ಸಾಲುದ್ದೀನ್ ಜೆ ಗಾಡಿಯಲ್ ನೀಡಿದ ದೂರಿನ ಮೇರೆಗೆ ಕೆಇಎ ನೌಕರ ಅವಿನಾಶ್ ಸೇರಿ 10 ಮಂದಿ ಆರೋಪಿಗಳನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆಇಎ ನೌಕರ ಅವಿನಾಶ್ ಸಹಾಯದಿಂದ ಲಕ್ಷಾಂತರ ರೂ ಹಣಕ್ಕೆ ಸೀಟುಗಳನ್ನು ಅಕ್ರಮವಾಗಿ ಡೀಲ್ ಮಾಡುತ್ತಿದ್ದರು.
ಅಭ್ಯರ್ಥಿಗಳು ಕಾಲೇಜು ಪ್ರವೇಶ ಪಡೆಯದ್ದರಿಂದ ಮುಂದಿನ ಅರ್ಹ ಅಭ್ಯರ್ಥಿಗಳಿಗೆ ಉದ್ದೇಶಪೂರ್ವಕವಾಗಿ ವಂಚಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಹಾಗೂ ಸರ್ಕಾರಿ ಸೀಟುಗಳ ಬದಲಿಗೆ ಮ್ಯಾನೇಜ್ ಮೆಂಟ್ ಕೋಟಾದ ಸೀಟುಗಳಾಗಿ ಪತಿವರ್ತಿಸಿ ಸರ್ಕಾರಿ ಖಾಸಗಿ ಕಾಲೇಜು ಅಭ್ಯರ್ಥಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದವು ಎಂಬ ಆರೋಪ ಕೇಳಿಬಂದಿತ್ತು.