ಚಿಕ್ಕಮಗಳೂರು : ಕರ್ನಾಟಕ ಈಗ ನಕ್ಸಲ್ ಮುಕ್ತವಾಗಿದ್ದು, ಪೊಲೀಸರ ಮುಂದೆ ನಕ್ಸಲ್ ರವೀಂದ್ರ ಶರಣಾಗಿದ್ದಾರೆ.
ಚಿಕ್ಕಮಗಳೂರಿನ ಎಸ್ ಪಿ ಕಚೇರಿಗೆ ನಕ್ಸಲ್ ರವೀಂದ್ರ ಆಗಮಿಸಿದ್ದು, ಎಸ್ ಪಿ ವಿಕ್ರಂ ಆಮ್ಟೆ ಮುಂದೆ ಶರಣಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲಾಡಳಿತ ಮುಂದೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗದ ಕೋಟೆಹೊಂಡದ ನಕ್ಸಲ್ ರವೀಂದ್ರ ಶರಣಾಗಿದ್ದಾನೆ. ವಿಕ್ರಂಗೌಡ ಎನ್ ಕೌಂಟರ್ ಬಳಿಕ ನಕ್ಸಲ್ ರವೀಂದ್ರ ನಾಪತ್ತೆಯಾಗಿದ್ದನು.
ಜಿಲ್ಲೆಯಲ್ಲಿ ರವೀಂದ್ರ ಮುಂದೆ 14 ಕೇಸ್ ಗಳಿದ್ದು, ಒಂದೂವರೆ ದಶಕದಿಂದ ಭೂಗತರಾಗಿದ್ದ ನಕ್ಸಲ್ ರವೀಂದ್ರ ಪೊಲೀಸರಿಗೆ ಶರಣಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲಾಧಿಕಾರಿ ವೀಣಾ ನಾಗರಾಜ್, ಎಸ್ ಪಿ ವಿಕ್ರಂ ಆಮ್ಟೆ ಮುಂದೆ ಆತ ಶರಣಾಗತಿಯಾಗಲಿದ್ದಾನೆ.ವಿಕ್ರಂಗೌಡ ಎನ್ ಕೌಂಟರ್ ಬಳಿಕ ನಕ್ಸಲ್ ರವೀಂದ್ರ ನಾಪತ್ತೆಯಾಗಿದ್ದನು.