ಬೆಂಗಳೂರು : ಕನ್ನಡಿಗರ ಮೇಲೆ ಹಲ್ಲೆ ಪ್ರಕರಣ ಖಂಡಿಸಿ, ಕನ್ನಡ ನಾಡು, ಭಾಷೆ, ನೆಲ-ಜಲ ರಕ್ಷಣೆಗಾಗಿ ಒತ್ತಾಯಿಸಿ ಮಾರ್ಚ್ 22ರಂದು ಕರ್ನಾಟಕ ಬಂದ್ ಗೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಕರೆ ನೀಡಿದೆ.
ಕರ್ನಾಟಕ ಬಂದ್ ವೇಳೆ ಏನು ಇರುತ್ತದೆ..? ಏನು ಇರಲ್ಲ ಎಂಬುದನ್ನು ಮೂಲಗಳು ತಿಳಿಸಿದೆ. ಈ ಈ ಕುರಿತು ಇಲ್ಲಿದೆ ಒಂದು ವರದಿ.
ಏನಿರುತ್ತೆ..?
ಅಗತ್ಯ ಪೂರೈಕೆ ಸೇವೆಗಳು
ಹಾಲು, ತರಕಾರಿ, ದಿನಸಿ ಅಂಗಡಿಗಳು
ಆಸ್ಪತ್ರೆ, ಮೆಡಿಕಲ್ ಸ್ಟೋ್ರ್.
ರೈಲು ಹಾಗೂ ವಿಮಾನ ಸೇವೆ
ಏನಿರಲ್ಲ..?
ಆಟೋ ಸಂಚಾರ ಬಂದ್
ಚಿತ್ರಮಂದಿರಗಳು ಬಂದ್
ಸಿನಿಮಾ ಶೂಟಿಂಗ್ ಬಂದ್
ಹೋಟೆಲ್, ಮಾಲ್ ಗಳು ಅನುಮಾನ
ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ ಸಂಚಾರ ಬಂದ್
ಶಾಲಾ ಕಾಲೇಜುಗಳಿಗೆ ರಜೆ ನೀಡುವ ಬಗ್ಗೆ ಹಿಂದಿನ ದಿನ ಆದೇಶ ಹೊರ ಬೀಳುವ ಸಾಧ್ಯತೆಯಿದೆ.
ಕರ್ನಾಟಕದಲ್ಲಿರುವ ಪರಭಾಷಿಗರು ಕನ್ನಡ ಕಲಿಯಲೇಬೇಕು : ವಾಟಾಳ್ ನಾಗರಾಜ್
ಕನ್ನಡಿಗರ ಮೇಲೆ ಪರಭಾಷಿಗರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರ ಮೇಲೆಯೇ ದೌರ್ಜನ್ಯ ನಡೆಸುತ್ತಿದ್ದಾರೆ. ಕನ್ನಡದಲ್ಲಿ ಮಾತನಾಡಿದರೆ ಬೇರೆ ರಾಜ್ಯದವರು ಕನ್ನಡಿಗರ ಮೇಲೆ ಹಲ್ಲೆ ನಡೆಸುತ್ತಿರುವ ಘಟನೆ ನಡೆಯುತ್ತಿರುವುದು ಖಂಡನೀಯ. ಇಂತಹ ಘಟನೆಗಳು ನಿಲ್ಲಬೇಕು ಎಂದು ಗುಡುಗಿದರು.
ಈ ನಿಟ್ಟಿನಲ್ಲಿ ಮಾರ್ಚ್ 22ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ.
ಕರ್ನಾಟಕದಲ್ಲಿರುವ ಬೇರೆ ರಾಜ್ಯದವರು ಕನ್ನಡ ಕಲಿಯಲೇಬೇಕು. ಇಲ್ಲವಾದಲ್ಲಿ ಕರ್ನಾಟಕ ಬಿಟ್ಟು ಹೋಗಬೇಕು ಎಂದು ಆಗ್ರಹಿಸಿದರು.ತಮಿಳರು, ತೆಲುಗು, ಮಲಯಾಳಿಗಳು, ಗುಜರಾತಿಗಳು, ಬಿಹಾರಿಗಳು, ಮಾರ್ವಾಡಿಗರು ಯಾರೇ ಆಗಿರಲಿ ಕನ್ನಡ ಕಲಿಯಲೇಬೇಕು. ಇಲ್ಲದಿದ್ದರೆ ರಾಜ್ಯ ಬಿಟ್ಟು ಹೋಗಬೇಕು ಯಾವುದೇ ಮುಲಾಜಿಲ್ಲ. ನಾವು ಜೈಲಿಗೆ ಹೋದರು ತೊಂದರೆ ಇಲ್ಲ. ಕರ್ನಾಟಕದಲ್ಲಿ ಇರುವುದಾದರೆ ನೀವು ಕನ್ನಡ ಕಲಿಯಲೇಬೇಕು ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.